ಈ ಟಿವಿಯಲ್ಲಿ ಜುಲೈ ೨೮ರಿಂದ ‘ಕುಲವಧು
Posted date: 23 Wed, Jul 2014 – 10:05:00 AM

 ಅಸಹನೆಯ ಕಿಡಿ ಇಲ್ಲಿ ಅಸೂಯೆಗೆ ದಾರಿ ಮಾಡಿ ಕೊಟ್ಟಿದೆ.
‘ಮಿಲನ’ ಪ್ರಕಾಶ್ ಹೆಸರು ಹಿರಿತೆರೆ- ಕಿರುತೆರೆಗಳ ವೀಕ್ಷಕರಿಬ್ಬರಿಗೂ ಚಿರಪರಿಚಿತ. ಈ ಟಿವಿ ವಾಹಿನಿಯ ಪ್ರಸ್ತುತ ಸೂಪರ್‌ಹಿಟ್ ಆಗಿರುವ ‘ಲಕ್ಷ್ಮೀ ಬಾರಮ್ಮ’  ನಿರ್ಮಾಪಕರಿಂದ ಮತ್ತೊಂದು ಧಾರಾವಾಹಿ ನಿರ್ಮಾಣಕ್ಕೆ ಚಾಲನೆ. ತಮ್ಮ ಜೈಮಾತಾ ಕಂಬೈನ್ಸ್ ಮೂಲಕ ಈ ಟಿವಿ ವಾಹಿನಿಗಾಗಿ ‘ಕುಲವಧು’ ಧಾರಾವಾಹಿಯ ನಿರ್ಮಾಣದ ಪರಿಕ್ರಮಣ ಪ್ರಕಾಶ್ ಅವರಿಂದ.
ಈ ‘ಕುಲವಧು’  ಧಾರಾವಾಹಿಯ ನಿರ್ದೇಶಕರಾಗಿ ಸುಭಾಶ್ ಅಡಿ ಇರಿಸಿದ್ದಾರೆ. ಪವಿತ್ರ ಬಂಧನ, ಸೂರ್ಯಕಾಂತಿ, ಪ್ರೀತಿಯಿಂದ, ಚಿಟ್ಟೆಹೆಜ್ಜೆ ಧಾರಾವಹಿಗಳ ಸಂಚಿಕೆ ನಿರ್ದೇಶಕರಾಗಿ ಕನ್ನಡಿಗರ ಮನಗೆದ್ದ ಸುಭಾಶ್ ‘ಕುಲವಧು’ ಮೂಲಕ ಧಾರಾವಾಹಿ ಮೂಲಕ ಪ್ರಧಾನ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
‘ಕುಲವಧು’ ಇಬ್ಬರು ಹುಡುಗಿಯರ ನಡುವಣ ವೈರುಧ್ಯದ ಮೇಲೆ ಆಧಾರಿತ ಕಥೆ. ಪರಿಚಯ, ಗೆಳೆತನ, ಜೀವಕ್ಕೆ ಜೀವ ನೀಡುವ ಹಂತದಲ್ಲಿನ ಸುಮಧುರ ಗೆಳೆತನದ ಎಳೆ ಇವರಿಬ್ಬರ ಮಧ್ಯೆ ಹರಡುತ್ತದೆ.
‘ವಚನ’ ಪಾತ್ರಧಾರಿ ಶ್ರೀಮಂತಿಕೆಯಲ್ಲಿ ಹುಟ್ಟಿದಾಕೆ. ದೌರ್ಜನ್ಯ, ಹಕ್ಕುಗಳ ಪರಾಕಾಷ್ಠೆಯ ಚಿತ್ರಣಕ್ಕೆ ಮೂರ್ತರೂಪ. ‘ಧನ್ಯ’  ಪಾತ್ರಧಾರಿ ಕೆಲಸದಾಕೆಯ ಮಗಳು. ಮೃದುಧೋರಣೆ ಹಾಗೂ ವಿನಯದ ಪ್ರತಿರೂಪ. ‘ಕುಲವಧು’ ಈ ಎರಡು ಜೀವದ ಗೆಳತಿಯರ ಪಾತ್ರದ ಸುತ್ತ ಹರಿದಾಡುತ್ತದೆ.
    ಧನ್ಯ ಪಾತ್ರಧಾರಿ ದೀಪಿಕಾ ಕಿರುತೆರೆಗೆ ಮೊದಲ ಎಂಟ್ರಿ. ಹಿತಾನುಭವದ ಪಾತ್ರ ಈಕೆಯದು. ಸೂಕ್ಷ್ಮ ಮನದ ಸೀದಾ ಸಾದ ಹುಡುಗಿ. ತನ್ನ ಸ್ನೇಹಿತೆ ‘ವಚನ’ಳಿಗಾಗಿ ಏನನ್ನಾದರೂ ಮಾಡಬಲ್ಲ ಸ್ನೇಹಮಯಿ. ಧಾರಾವಾಹಿಯಲ್ಲಿ ಈಕೆಯದು ಪ್ರಧಾನ ಪಾತ್ರ. ದೀಪಿಕಾ ಮೂಲತಃ ಶಾಸ್ತ್ರೀಯ ನೃತ್ಯ ಕಲಾವಿದೆ. ವೀಣಾವಾದಕಿ. ಹತ್ತುಹಲವು ಸಂಗೀತ ಕಾರ್ಯಕ್ರಮ ನೀಡಿರುವ ಕಲಾವಿದೆ.
ವಚನ ಪಾತ್ರಧಾರಿ ದಿಶಾ ಸಹ ಕಿರುತೆರೆಗೆ ಮೊದಲ ಎಂಟ್ರಿ. ಧೈರ್ಯ ಮತ್ತು ಖಡಕ್ಕಾದ ಸ್ವಭಾವ ಹೊಂದಿದ ಹುಡುಗಿ. ಧನ್ಯಾಳ ಬಗೆಗೆ ಅಸೂಯೆ. ಧನ್ಯಳಿಗೆ ದೊರಕುವ ಎಲ್ಲ ಸವಲತ್ತು ಎಲ್ಲ ನನಗೆ ಇರಲಿ ಎಂಬ ಮನೋಭಾವ. ದಿಶಾ ಮೂಲತಃ ನೃತ್ಯಗಾರ್ತಿ. ಶಾಸ್ತ್ರಿಯ ನೃತ್ಯದಲ್ಲಿ ಪರಿಶ್ರಮ ಹೊಂದಿದ್ದಾರೆ. ಬಾಲಿವುಡ್, ಫ಼್ರೀಸ್ಟೈಲ್ ಪ್ರಕಾರಗಳಲ್ಲೂ ಎತ್ತಿದ ಕೈ. ಹತ್ತುಹಲವು ಶೋಗಳನ್ನು ಸಹ ದಿಶಾ ನೀಡಿದ್ದಾರೆ.
 ಗೌರವ್ ಪಾತ್ರಧಾರಿ ವಿನಯ್. ‘ಕುಲವಧು’ ಧಾರಾವಾಹಿಯಲ್ಲಿ ಈ ಪಾತ್ರ ಮುಖ್ಯವಾಹಿನಿಯಲ್ಲಿರುತ್ತದೆ. ಶ್ರೀಮಂತಿಕೆಯಲ್ಲಿ ಜನಿಸಿದ್ದರೂ ಸರಳಜೀವನದ ಅಭಿಲಾಶಿ. ಧನ್ಯಳ ಮೇಲೆ ಹೆಚ್ಚು ಪ್ರೀತಿ.
‘೬-೫=೨‘ ಚಿತ್ರದಲ್ಲಿ ಅಭಿನಯಿಸಿದ್ದ ವಿನಯ್ ಮೂಲತಃ ರಂಗಭೂಮಿ ನಟ. ಜೀ ಕನ್ನಡದಲ್ಲಿ ಪ್ರಸಾರಗೊಂಡ ‘ಭಾರತಿ’ ಧಾರಾವಾಹಿಯಲ್ಲಿ ನಟಿಸಿದ್ದ ಅನುಭವಿ. ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದು ಇದೆ.
 ದಿವ್ಯಾ ಪಾತ್ರಧಾರಿ ಉಷಾಭಂಡಾರಿ ವಚನಾಳ ತಾಯಿ. ತನ್ನ ಸಂಸಾರ ಇಷ್ಟಪಡುವ ಸರಳಜೀವಿ. ವಚನ ಮುಂದಿನ ದಿನಗಳಲ್ಲಿ ಒಳ್ಳೆಯ ಹುಡುಗನನ್ನು ಮದುವೆಯಾಗಲಿ ಎಂಬ ಹೆಬ್ಬಯಕೆ ಹೊತ್ತ ಮಾತೃಜೀವಿ. ಧನ್ಯಾಳಿಗೂ ಅಂತಹ ವರ ಸಿಗಳೆಂಬ ಹಾರೈಕೆ ಇವಳದು. ಉಷಾಭಂಡಾರಿ ಈ ತನಕ ೮೦ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ೬೦ಕ್ಕೂ ಮಿಕ್ಕಿ ಧಾರಾವಾಹಿಗಳಲ್ಲಿ ನಟನೆ, ೧೪ ಸಿನಿಮಾಗಳಲ್ಲಿ ತನ್ನ ಪ್ರತಿಭೆ ಸಾಬೀತು. ಯಕ್ಷಗಾನ, ಭರತನಾಟ್ಯ ಕಲಾವಿದೆ. ನಾದಮೃದಂಗ ಕಿರುಚಿತ್ರದ ಅಭಿನಯಕ್ಕೆ ಶ್ರೇಷ್ಠನಟಿ ಪ್ರಶಸ್ತಿ ದೊರಕಿದೆ.
ಇಂದಿರಾಪ್ರಸಾದ್ ಪಾತ್ರಧಾರಿ ಅಶೋಕ್ ಹೆಗಡೆ ವಚನಳ ತಂದೆ. ಶ್ರೀಮಂತ. ಹಮ್ಮುಬಿಮ್ಮುಗಳಿಲ್ಲದ ಸರಳಜೀವಿ. ಮಗಳು ವಚನಾಳಂತೆಯೇ ಧನ್ಯಳನ್ನು ಇಷ್ಟಪಡುವ ತಂದೆ. ಅಶೋಕ್ ಹೆಗಡೆ ಇಲ್ಲಿಯವರೆಗೂ ೮೦ ಮೆಗಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಹ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕನಾಗಿ ಅನುಭವಿ.
ಸುರೇಶ್ ರೈ ನರೇಂದ್ರ ಜೈನ್ ಪಾತ್ರಧಾರಿ. ಗೌರವ್‌ನ ತಂದೆ. ಮಗನನ್ನು ಪ್ರೀತಿಸುವ ಮತ್ತು ಸಹಬಾಳ್ವೆಯ ಹರಿಕಾರ. ಇಂದಿರಾಪ್ರಸಾದ್‌ನ ಸ್ನೇಹಿತ. ಸಿನಿಮಾ ಹಾಗೂ ಧಾರಾವಹಿಗಳಲ್ಲಿ ನಟಿಸಿದ್ದಾರೆ.
 ರೇಣುಕಾ ಸ್ಮೃತಿಜೈನ್ ಪಾತ್ರಧಾರಿ. ಗೌರವ್‌ನ ತಾಯಿ. ಶ್ರೀಮಂತೆ. ಆಸ್ತಿಕ ಮನೋಭಾವದ ಹೆಣ್ಣುಮಗಳು. ನಿನ್ನಿಂದಲೇ ಹಾಗೂ ಈ ಬಂಧನ ಚಿತ್ರಗಳಲ್ಲಿ ನಟಿಸಿದ್ದಾರೆ.
ಕುಲವಧು ಧಾರಾವಾಹಿ ಈ ಟಿವಿಯಲ್ಲಿ ಜುಲೈ ೨೮ರಿಂದ ಸಂಜೆ ೬.೩೦ಕ್ಕೆ ಪ್ರಸಾರವಾಗಲಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed